Thursday, October 7, 2010

ಗೋವಿಂದನ ಗಾದೆ ಪುರಾಣ ...!

1)ವೇದ ಸುಳ್ಳಾದರೂ ಗಾದೆ ಸುಳ್ಳಾಗದು
 2)ಆನೆ ನಡೆದದ್ದೇ ದಾರಿ
 3)ಊರಿಗೊಂದು ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ
 4)ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ
 5)ಕುಂತು ತಿಂದರೆ ಕುಡಿಕೆ ಹೊನ್ನು ಸಾಲದು
 6)ಕೈ ಕೆಸರಾದರೆ ಬಾಯಿ ಮೊಸರು
 7)ಕೆಟ್ಟು ಪಟ್ಟಣ ಸೇರು
 8)ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ
  9)ಮಾತು ಬೆಳ್ಳಿ ಮೌನ ಬಂಗಾರ
 10)ಪಾಲಿಗೆ ಬಂದಿದ್ದು ಪಂಚಾಮೃತ
 11)ದುಡಿಮೆಯೇ ದುಡ್ಡಿನ ತಾಯಿ
 12)ಬೆರಳು ತೋರಿಸಿದರೆ ಹಸ್ತ ನುಂಗೋ ವಂಶ
 13)ನಯಶಾಲಿ ಆದವನು ಜಯಶಾಲಿ ಆದನು
 14)ರವಿ ಕಾಣದನ್ನ ಕವಿ ಕಂಡ
  15)ಶಿವ ಪೂಜೆಲಿ ಕರಡಿ ಬಿಟ್ಟಂತೆ
  16)ಕೊಂಕಣ ಸುತ್ತಿ ಮೈಲಾರಕ್ಕೆ ಯಾಕ ಬರೋದು
  17)ಹುಟ್ಟು ಗುಣ ಸುಟ್ರು ಹೋಗೋಲ್ಲ
  18)ಕೋತಿ ತನು ಕೆಡೋದಲ್ದೆ ವನನೆಲ್ಲ ಕೆಡಿಸ್ತು
  19)ನಾಯಿ ಬಾಲ ಯಾವತ್ತಿದ್ರೂ ಡೊಂಕು
  20)ಕಡ್ಡಿನ ಗುಡ್ಡ ಮಾಡೋ ಸ್ವಭಾವ
  21) ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದಂತೆ
  22)ಕೊಚ್ಚೆ ಮೇಲೆ ಕಲ್ಲು ಹಾಕಿ ಸಿಡಿಸ್ಕೊಳ್ಳೋದು
  23)ಗಿಣಿ ಸಾಕಿ ಗಿದಗನ ಕೈಗೆ ಕೊಟ್ವಿ
  24) ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ
  25)ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
  26)ಹೆತ್ತೋರ್ಗೆ ಹೆಗ್ಗಣ ಮುದ್ದು ಕಟ್ಗೊಂಡೋರ್ಗೆ ಕೋಡಂಗಿ ಮುದ್ದು
  27)ಬೋರ್ಗಲ್ಲ ಮೇಲೆ ನೀರು ಸುರಿದಂತೆ................ಗಾದೆಗಳು ಇವೆ


    ಕೆಟ್ಟು ಪಟ್ಟಣ ಸೇರು.................,,,ಅತಿ ಚಿಕ್ಕ ಗಾದೆ ,